ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ವ್ಯಾಪ್ತಿಯಲ್ಲಿನ ನಾಲ್ಕು ಜಿಲ್ಲೆಗಳ ಪದವಿ ಕಾಲೇಜುಗಳ ರಸಾಯನಶಾಸ್ತ್ರ ವಿಷಯದ “ಕೆಮ್ ಫೋರಮ್” ಸಂಘಟನೆ ಪ್ರಸಕ್ತ ಶೈಕ್ಷಣಿಕ ಸಾಲಿನ ವಾರ್ಷಿಕ ಕಾರ್ಯಕ್ರಮದ ನಿಮಿತ್ತ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿಯಲ್ಲಿ ನಡೆಸಿದ ವಿವಿಧ ಚಟುವಟಿಕೆಗಳಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯ, ಹೊನ್ನಾವರದ ವಿದ್ಯಾರ್ಥಿಗಳಿಗಾದ ಜೋನ್ಸನ್ (ಬಿ.ಎಸ್ಸಿ. 4 ನೇ ಸೆಮ್), ರಾಜೇಶ್ವರಿ (ಬಿ.ಎಸ್ಸಿ. 6 ನೇ ಸೆಮ್) ಅತುಲ್ ಅರ್ವಾರೆ (ಬಿ.ಎಸ್ಸಿ. 4 ನೇ ಸೆಮ್) ಇವರು ಪ್ರಯೋಗಾಲಯದಲ್ಲೇ ನಡೆಸುವ ವಿನೂತನ ರಸಾಯನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ, ಮತ್ತು “ರಸಾಯನಶಾಸ್ತ್ರ ತರಗತಿಯ ರಸ ಸಂದರ್ಭಗಳು” ಭಾಷಣ ಸ್ಪರ್ಧೆಯಲ್ಲಿ ಕಾರ್ತಿಕ (ಬಿ.ಎಸ್ಸಿ. 4 ನೇ ಸೆಮ್) ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಹಾಗೂ ರಸಪ್ರಬಂಧ “ರಸಾಯನಶಾಸ್ತ್ರ ವಿಷಯದಲ್ಲಿ ನನಗಿಷ್ಟವಾದ ಪರಿಕಲ್ಪನೆ” ಎಂಬ ವಿಷಯದಲ್ಲಿ ಪ್ರಬಂಧ ಬರೆದ ತನುಜಾ ನಾಯ್ಕ, (ಬಿ.ಎಸ್ಸಿ. 6 ನೇ ಸೆಮ್) ದ್ವಿತೀಯ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಅವರೆಲ್ಲರನ್ನೂ ಕಾಲೇಜಿನ ಪ್ರಾಚಾರ್ಯರು, ಅಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸುತ್ತಾರೆ.