ದಿನಾಂಕ 11-04-2022 ದಂದು ಎಸ್.ಡಿ.ಎಂ. ಕಾಲೇಜಿನ ಪ್ಲೇಸ್‍ಮೆಂಟ್ ಸೆಲ್‍ನ ಆಶ್ರಯದಲ್ಲಿ ಬಿ.ಕಾಂ. ಮತ್ತು ಬಿ.ಬಿ.ಎ. 5 ನೇ ಸೆಮಿಸ್ಟರ್‍ನ ವಿದ್ಯಾರ್ಥಿಗಳಿಗಾಗಿ ಯುವಜಯ ಪೌಂಡೇಶನ್’ ಹಾಗೂ ‘ವಿದ್ಯಾಪೋಷಕ’ ಧಾರವಾಡ ಇವುಗಳ ವತಿಯಿಂದ ಮೂರು ದಿನಗಳ ಉದ್ಯೋಗ ಸಿದ್ದತಾ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು. ಕಾರ್ಯಾಗಾರಕ್ಕೆ 105 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುತ್ತಾರೆ. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಡಾ. ಎಸ್.ಎಸ್.ಹೆಗಡೆ, ನಿವೃತ್ತ ಪ್ರಾಚಾರ್ಯರು ವಿದ್ಯಾರ್ಥಿಗಳಿಗೆ ಪದವಿಯೊಟ್ಟಿಗೆ ಉದ್ಯೋಗ ಪಡೆದುಕೊಳ್ಳಲು ತಮ್ಮ ಉದ್ಯೋಗಾರ್ಹತೆಯನ್ನು ಹೆಚ್ಚಿಸಿಕೊಳ್ಳಲು ಇಂತಹ ತರಬೇತಿಗಳು ಇಂದಿನ ಯುವಕರಿಗೆ ಅಗತ್ಯವಾಗಿದೆ ಎಂದು ನುಡಿದರು. ಅಲ್ಲದೇ ಈ ಭಾಗದ ವಿದ್ಯಾರ್ಥಿಗಳು ಪದವಿಯಲ್ಲಿ ಸಾಕಷ್ಟು ಅಂಕ ಗಳಿಸಿದಾಗ್ಯೂ ಸೂಕ್ತ ತರಬೇತಿಗಳಿಲ್ಲದೇ ಸಂದರ್ಶನಗಳಲ್ಲಿ ವಿಫಲರಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾದ ಶ್ರೀ ಗಿರೀಶ ನಾಗನೂರು, ಮುಖ್ಯಾಧಿಕಾರಿಗಳು ಯುವಜಯ ಪೌಂಡೇಶನ್, ಧಾರವಾಡ ಇವರು ಮೂರು ದಿನಗಳಲ್ಲಿ ನಡೆಯುವ ತರಬೇತಿಯ ವಿವರ ನೀಡಿದರು ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ವಿಜಯಲಕ್ಷ್ಮಿ ಎಂ. ನಾಯ್ಕ ಶುಭ ಕೋರಿದರು. ಆರಂಭದಲ್ಲಿ ಪ್ಲೇಸ್‍ಮೆಂಟ್ ಆಫೀಸರ್ ಡಾ. ಡಿ. ಎಲ್. ಹೆಬ್ಬಾರ ಪ್ರಾಸ್ಥಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು. ಬಿ.ಕಾಂ. 5 ನೇ ಸೆಮ್ ವಿದ್ಯಾರ್ಥಿನಿ ಕು. ಅಂಕಿತಾ ಭಟ್ಟ ಪ್ರಾರ್ಥಿಸಿದರು. ಶ್ರೀ ಎಚ್. ಟಿ. ಅರ್ವಾರೆ ವಂದಿಸಿದರು ಹಾಗೂ ಶ್ರೀ ರೋಹಿತ್ ಡಿಸಿಲ್ವಾ ನಿರೂಪಿಸಿದರು. ಶ್ರೀ ವೆಂಕಟೇಶ, ಕಾರ್ಯನಿರ್ವಾಹಕ ಅಧಿಕಾರಿ, ವಿದ್ಯಾಪೋಷಕ, ಧಾರವಾಡ ಮತ್ತು ಕಾರ್ತಿಕ ಹೆಗಡೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.