ದಿನಾಂಕ 16-01-2021ರ ಶನಿವಾರ ಮುಂಜಾನೆಎಸ್. ಡಿ. ಎಮ್.ಪದವಿ ಕಾಲೇಜಿನ ಪ್ಲೇಸ್‍ಮೆಂಟ್ ಸೆಲ್‍ನಆಶ್ರಯದಲ್ಲಿ ಮಂಗಳೂರು ಮೂಲದ ‘ದಿಯಾ ಸಿಸ್ಟಮ್ಸ್’ ಕಂಪನಿಯವರು ಪದವಿದರರಿಗೆಉತ್ತರಕನ್ನಡಜಿಲ್ಲಾ ಮಟ್ಟದಕ್ಯಾಂಪಸ್ ಸಂದರ್ಶನ ನಡೆಸಿದರು.ಆನ್‍ಲೈನ್ ಪರೀಕ್ಷೆಗೆಜಿಲ್ಲೆಯ 256 ಪದವಿದರರು ಭಾಗವಹಿಸಿ 120 ಜನತೇರ್ಗಡೆಯಾಗಿಅಂತಿಮ ಸಂದರ್ಶನದಲ್ಲಿ ಸುಮಾರು 70 ವಿದ್ಯಾರ್ಥಿಗಳು ಭಾಗವಹಿಸಿದ್ದರು.ಅದರಲ್ಲಿ ವಿವಿಧ ಹಂತದ ಸಂದರ್ಶನಗಳನ್ನು ಎದುರಿಸಿ ಅಂತಿಮವಾಗಿ 06 ವಿದ್ಯಾರ್ಥಿಗಳು ಆಯ್ಕೆಯಾಗಿ ನೇಮಕಾತಿಆದೇಶ ಪಡೆದುಕೊಂಡರು.

ಆರಂಭದಲ್ಲಿ ನಡೆದಉದ್ಗಾಟನಾಕಾರ್ಯಕ್ರಮದಲ್ಲಿ ಎಂ. ಪಿ. ಇ. ಸೊಸೈಟಿಯ ಶಿಕ್ಷಣ ಸಂಸ್ಥೆಯಉಪಾಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಭಟ್‍ರವರು ದೀಪ ಬೆಳಗಿಸಿ ಕಾರ್ಯಮವನ್ನು ಉದ್ಗಾಟಿಸಿ, ನಮ್ಮ ಮಹಾವಿದ್ಯಾಲಯದ ಪ್ಲೆಸ್‍ಮೆಂಟ್ ಸೆಲ್‍ಇಂತಹ ಅನೇಕ ಕ್ಯಾಂಪಸ್ ಸಂದರ್ಶನಗಳನ್ನು ಪ್ರತಿ ವರ್ಷಆಯೋಜಿಸುತ್ತ ಬಂದಿದೆ ಹಾಗೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.ಮುಖ್ಯಅತಿಥಿಯಾಗಿ ಆಗಮಿಸಿದ ದಿಯಾ ಸಿಸ್ಟಮ್ಸ್ ಕಂಪನಿಯ ಅಸಿಸ್ಟಂಟ್ ಮ್ಯಾನೇಜರ್ ಶ್ರೀಮತಿ ವಿಜಯಲಕ್ಷ್ಮಿಯವರು ಸಂದರ್ಶನ ನಡೆಸುವ ಪ್ರಕ್ರಿಯೆ ಬಗ್ಗೆ ತಿಳಿಸಿ ಆಯ್ಕೆಯಾದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳನ್ನು ತಿಳಿಸಿಕೊಟ್ಟರು.ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕಾರ್ಯದರ್ಶಿ ಶ್ರೀ ಎಸ್. ಎಂ.ಭಟ್‍ರವರು ಹಾಗೂ ಖಜಾಂಚಿ ಶ್ರೀ ಉಮೇಶ ನಾಯ್ಕರವರು ವಿದ್ಯಾರ್ಥಿಗಳಿಗೆ ಶುಭಕೋರಿದರು.ಆರಂಭದಲ್ಲಿಕಾಲೇಜಿನ ಪ್ಲೇಸ್‍ಮೆಂಟ್‍ಆಫೀಸರ್‍ಡಾ.ಡಿ. ಎಲ್. ಹೆಬ್ಬಾರ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದಅಧ್ಯಕ್ಷತೆಯನ್ನುಕಾಲೇಜಿನ ಪ್ರಾಚಾರ್ಯೆಡಾ. ವಿಜಯಲಕ್ಷ್ಮಿಎಂ. ನಾಯ್ಕರವರು ವಹಿಸಿದ್ದರು.ಪ್ರೊ.ಎಚ್. ಟಿ. ಆರವರೆ ವಂದಿಸಿದರು.