ಕ್ಯಾಂಪಸ್ ಸಂದರ್ಶನ ವರದಿ

ಎಸ್.ಡಿ.ಎಂ. ಕಾಲೇಜಿನ ಪ್ಲೇಸ್‍ಮೆಂಟ್ ಸೆಲ್ ಹಾಗೂ ರಸಾಯನಶಾಸ್ತ್ರ ಸ್ನಾತಕೋತ್ತರ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 06-01-2022 ರಂದು ಎಂ.ಎಸ್ಸಿ. ಕೆಮಿಸ್ಟ್ರಿ ಪದವಿಧರರಿಗಾಗಿ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಯಿತು.
ಮೈಸೂರು ಮೂಲದ ‘ಯಾದವಿ ಸೈಂಟಿಪಿಕ್ ಸೊಲ್ಯಶನ್ಸ್’ ಕಂಪನಿಯ ಡೈರೆಕ್ಟರ್‍ಗಳಾದ ಶ್ರೀ ನರೇಂದ್ರ ಕುಮಾರ ಹಾಗೂ ಡಾ ಸೋಮನಾಥ ಗಿರಿಯವರು ಕಾಲೇಜಿಗೆ ಆಗಮಿಸಿ ಆಯ್ಕೆ ನಡೆಸಿದರು.
ಕುಮಟಾ, ಹೊನ್ನಾವರ ಮತ್ತು ಉಡುಪಿ ತಾಲೂಕು ಗಳಿಂದ ಆನ್‍ಲೈನ್‍ನಲ್ಲಿ ಆಯ್ಕೆಗೊಂಡ 16 ರಸಾಯನಶಾಸ್ತ್ರ ಸ್ನಾತಕೋತ್ತರ ಪದವಿಧರರು ವಯಕ್ತಿಕ ಸಂದರ್ಶನಕ್ಕೆ ಹಾಜರಾಗಿದ್ದು, ಅವರಲ್ಲಿ ನಾಲ್ಕು ವಿದ್ಯಾರ್ಥಿಗಳನ್ನು ಕೆಮಿಸ್ಟ್ ಹುದ್ದೆಗೆ ಆಯ್ಕೆ ಮಾಡಿ ಆದೇಶ ನೀಡಲಾಯಿತು.
ಆರಂಭದಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಭಟ್ಟ, ಇವರು ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಕೋರಿದರು. ಕಂಪನಿಯ ಮಾಲಿಕರಾದ ಶ್ರೀ ನರೇಂದ್ರ ಕುಮಾರ ಆರ್. ಉದ್ಯೋಗದ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ವಿಜಯಲಕ್ಷ್ಮಿ ನಾಯ್ಕ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಬಳಸಿಕೊಳ್ಳಲು ಕರೆ ನೀಡಿದರು. ಪ್ಲೇಸ್‍ಮೆಂಟ್ ಆಫೀಸರ್ ಡಾ. ಡಿ. ಎಲ್. ಹೆಬ್ಬಾರ ಪ್ರಾಸ್ಥಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಡಾ. ಪಿ. ಎಂ. ಹೊನ್ನಾವರ ವಂದಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಹಾಗೂ ಡಾ. ಮಂಜುನಾಥ ಹೆಗಡೆ ನಿರೂಪಿಸಿದರು.