“ಭಾಷಾ ಬೋಧನೆಯ ಬಹುಮುಖಿ ನೆಲೆಗಳು”

ಸಂಕಲ್ಪ ಶಕ್ತಿಯ ಶರಣಾಗತಿ ಎಂದಿಗೂ ಸಲ್ಲದು – ಹಿರಿಯ ಕವಿ ಎಸ್. ಎಸ್. ಶಿವಪ್ರಕಾಶ್
ಹಿಂದೆ ಮಾತೃಭಾಷೆಯಲ್ಲಿಯೇ ಹೇಳುವ, ಬರೆಯುವ, ಅರ್ಥೈಸುವ, ಜ್ಞಾನ ಪ್ರಸಾರಣೆ ಮಾಡುವ ಕ್ರಿಯೆ ನಡೆಯುತ್ತಿತ್ತು. ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷವಾದರೂ ನಾವು ಇಂಗ್ಲೀಷ್ ಮೋಹವನ್ನು ಬಿಟ್ಟಿಲ್ಲ. ನಮ್ಮ ಸಂಕಲ್ಪ ಶಕ್ತಿಯ ಶರಣಾಗತಿ ಎಂದಿಗೂ ಸಲ್ಲದು ಎಂದು ಹಿರಿಯ ಕವಿ, ನಾಟಕಕಾರ ಎಚ್.ಎಸ್. ಶಿವಪ್ರಕಾಶ್ ಹೇಳಿದರು. ಅವರು ಎಂ. ಪಿ. ಇ. ಸೊಸೈಟಿಯ, ಎಸ್. ಡಿ. ಎಂ. ಕಾಲೇಜಿನ ಕನ್ನಡ ವಿಭಾಗ, ಬೆಂಗಳೂರಿನ ವಿ. ಕೃ. ಗೋಕಾಕ್ ವಾಙ್ಮಯ ಟ್ರಸ್ಟ್ ಮತ್ತು ಅಭಿನವ ಬೆಂಗಳೂರು ಇವರುಗಳÀ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಭಾಷಾ ಬೋಧನೆಯ ಬಹುಮುಖಿ ನೆಲೆಗಳು’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದ ಯಾವ ಭಾಗಕ್ಕೆ ಹೋದರೂ ಅಲ್ಲಿನ ಸ್ಥಳೀಯ ಭಾಷೆಗಳು ಇಂಗ್ಲಿಷ್‍ಗಿಂತ ಹೆಚ್ಚು ಸಂಪದ್ಭರಿತವಾಗಿವೆ. ಅವು ಜ್ಞಾನದ ಭಾಷೆಯಾಗಳಾಗಿವೆ. ಆದರೆ ಇಂಗ್ಲೀಷ್‍ನ್ನು ಮಾದರಿ ಎಂದು ನಂಬಿರುವುದು ನಮ್ಮ ದುರಂತ. ಒಂದು ಕಾಲದಲ್ಲಿ ಸಂಸ್ಕøತ ಭಾಷೆ ಸಾಹಿತ್ಯದ ಭಾಷೆಯಾಗಿತ್ತು. ಸಂವಹನದ ಭಾಷೆಯಾಗಿರಲಿಲ್ಲ. ಕೇವಲ ಸಂವಹನದ ಭಾಷೆಯಾಗಿರಬೇಕಿದ್ದ ಇಂಗ್ಲೀಷ್ ‘ಯಜಮಾನ್ಯ’ದಂತಿದೆ ಎಂದರು. ಹಲವು ದೇಶಗಳಲ್ಲಿ ಇಂಗ್ಲೀಷ್‍ನ್ನು ತಿರುಚಿ ತಮ್ಮ ಭಾಷೆಗೆ ಬಗ್ಗಿಸಿಕೊಂಡಿದ್ದಾರೆ. ನಾವು ನಮ್ಮ ಸರ್ವಸ್ವವನ್ನೂ ಇಂಗ್ಲೀಷ್‍ಗೆ ಅರ್ಪಿಸಿಕೊಂಡುಬಿಟ್ಟಿದ್ದೇವೆ. ನಾನು ಇಂಗ್ಲೀಷ್ ಬೇಡ ಎಂದು ಹೇಳುತ್ತಿಲ್ಲ. ಜಗತ್ತಿನ ಜೊತೆಗಿನ ಸಂಪರ್ಕಕ್ಕೆ ಇಂಗ್ಲೀಷ್ ಬೇಕು. ಆದರೆ ಅದರ ಮುಂದೆ ಮಂಡಿಯೂರುವುದು ಬೇಡ ಎಂದರು.
ದಿಕ್ಸೂಚಿ ಮಾತುಗಳನ್ನಾಡಿದ ಅಭಿನವ ರವಿಕುಮಾರ ಅವರು ‘ನಮ್ಮಲ್ಲಿರುವಷ್ಟು ಜಾನಪದ ಸಂಪತ್ತು ಬೇರೆಲ್ಲಿಯೂ ಇಲ’್ಲ. ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸುವ, ಅಧ್ಯಯನಕ್ಕೊಳಪಡಿಸುವ ಕೆಲಸ ಆಗಬೇಕಿದೆ. ಕುವೆಂಪುರವರು ವಿಶ್ವವಿದ್ಯಾಲಯಗಳಲ್ಲಿ ಮಾತ್ರವಲ್ಲ, ಭಾಷಾ ಬೋಧನೆ ಎನ್ನುವುದು ಸಮುದಾಯಗಳ ನಡುವೆಯೂ ಆಗಬೇಕೆಂದು ಪ್ರಸಾರಾಂಗದ ಮೂಲಕ ಹಳ್ಳಿಹಳ್ಳಿಗಳಲ್ಲಿ ಸಾಹಿತ್ಯ, ರಸಾಯನಶಾಸ್ತ್ರ, ತತ್ವಶಾಸ್ತ್ರ, ಆಹಾರಶಾಸ್ತ್ರ, ಸೂಕ್ಷ್ಮಾಣುಜೀವಶಾಸ್ತ್ರದಂತಹ ವಿಷಯಗಳ ಬಗೆಗೆ ತಜ್ಞರಿಂದ ಉಪನ್ಯಾಸಗಳನ್ನು ಏರ್ಪಡಿಸಿ ಪುಟ್ಟ ಪುಸ್ತಕಗಳನ್ನು ಪ್ರಕಟಿಸಿದರು. ಪೂರ್ಣಚಂದ್ರ ತೇಜಸ್ವಿಯವರು ಆಧುನಿಕ ತಂತ್ರಜ್ಞಾನದ ಮಹತ್ವವನ್ನು ಅರಿತು ತಮ್ಮ ಮಿಲೇನಿಯಂ ಮಾಲಿಕೆಯಲ್ಲಿ ಅನುವಾದಿಸಿ ಪ್ರಕಟಿಸಿದರು. ಕನ್ನಡದ್ದೇ ಆದ ತಂತ್ರಾಂಶವನ್ನು ಅಭಿವೃದ್ಧಿ ಪಡಿಸುವಲ್ಲಿ ದುಡಿದಿರುವುದು ಮಾದರಿಯ ಕೆಲಸ ಎಂದರು. ಮುಂದುವರೆದ ಅವರು ರಾಜಕುಮಾರ ಅವರಂಥ ನಟರ ಸಿನಿಮಾಗಳೂ ಕೂಡ ಸಮುದಾಯದ ಭಾಷೆಯನ್ನು ತಿದ್ದಿದ ಕ್ರಮ ಮತ್ತೊಂದು ಮಾದರಿ ಈಗ ಆಧುನಿಕ ತಂತ್ರಜ್ಞಾನವನ್ನು ಬಳಸಿ ಕನ್ನಡವನ್ನು ಕಟ್ಟಬೇಕಿದೆ. ಕಂಪ್ಯೂಟರ್‍ನಲ್ಲಿ ಮೊಬೈಲ್‍ನಲ್ಲಿ ಹಲವು ಕಂಪನಿಗಳು ಕನ್ನಡ ಭಾಷೆಯಲ್ಲಿ ಕೀಲಿಮಣೆ ಮತ್ತು ಸಂದೇಶ ತರುವುದರ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ಸಮಾಧಾನದ ಸಂಗತಿ ಎಂದರು. ಕಾಲೇಜಿನ ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ಎಂ. ನಾಯ್ಕ ಮತ್ತು ಎಂ. ಪಿ. ಇ. ಸೊಸೈಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ಟ ಶಿವಾನಿ ಉಪಸ್ಥಿತರಿದ್ದರು. ವಿವಿಧ ಮಹಾವಿದ್ಯಾಲಯಗಳ ಉಪನ್ಯಾಸಕರು ಪ್ರಾಧ್ಯಾಪಕರು ಭಾಗವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ನಾಗರಾಜ ಹೆಗಡೆ ಅಪಗಾಲ ಸ್ವಾಗತಿಸಿದರು. ಪ್ರಶಾಂತ ಹೆಗಡೆ ಮೂಡಲಮನೆ ನಿರೂಪಿಸಿದರು. ವಿದ್ಯಾದರ ಕಡತೋಕ ವಂದಿಸಿದರು.