Composition of IQAC 2017-18
1. Dr. M. P. Karki President
President, M.P.E. Society
2. Prof. S. S. Hegde Chair Person
Principal
3. Dr. V. M. Bhandari Co-ordinator
Associate Professor in Commerce
4.Dr. Vijayalaxmi M. Naik Secretary
Associate Professor in Botany
MEMBERS-MANAGEMENT
1. Shri. Krishnamurthy Bhat Vice-President, M.P.E. Society
2. Shri. P. I. Hegde Secretary, M.P.E. Society
SOCIETY
1. Shri. S. T. Naik Parent Representative
2. Shri. Raghav T, Pai ”
MEMBERS
TEACHING STAFF
1. Prof. P. M. Honavar Associate Professor in Chemistry
2. Prof. R. V. Hegde Associate Professor in Geography
3. Shri. M. R. Nayak Assistant Professor in Political Science
4. Shri. D. A. Gouda Librarian
OFFICE
1. Shri. Suryanarayan Hegde SDA
2. Smt. Prafulla Mesta Accountant
STUDENTS
- Harshita Moger BSc V Sem
- Anita Bhat BCom III Sem
IQAC ಸಭೆಯ ನಿರ್ಣಯಗಳು
ಸಭೆ ನಡೆದ ದಿನಾಂಕ 17-07-2017
ದಿನಾಂಕ 17-07-2017, ಸೋಮವಾರ ಮಧ್ಯಾಹ್ನ 3.30 ಕ್ಕೆ 2017-18 ಸಾಲಿನ IQAC ಪ್ರಥಮ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಈ ಕೆಳಗಿನಂತಿವೆ.
1. ಕಲಿಸುವಿಕೆಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸಹಾಯಕಾರಿಯಾಗಿರುವ ಶಿಕ್ಷಕರ ಕುರಿತ ಕ್ರಿಯಾತ್ಮಕ ಪ್ರತ್ಯುತ್ತರವನ್ನು ವಿದ್ಯಾರ್ಥಿಗಳಿಂದ ಸತತವಾಗಿ ಪಡೆಯುವಂತೆ ಮಾನ್ಯ ಅಧ್ಯಕ್ಷರು ಸಭೆಗೆ ತಿಳಿಸಿದರು.
2. ವಿದ್ಯಾರ್ಥಿಗಳಿಂದ ನಿಗದಿತ ಚಿಕ್ಕ ಮೊತ್ತದ ಹಣವನ್ನು ಶುಲ್ಕ ರೂಪದಲ್ಲಿ ಪಡೆದು ಅವರ ಸಂವಹನ ಕೌಶಲ್ಯವನ್ನು ಸುಧಾರಿಸುವಲ್ಲಿ ಇಂಗ್ಲೀಷ್ ವಿಭಾಗದವರು ಮಹತ್ವದ ಹೆಜ್ಜೆಯನ್ನಿಟ್ಟಿರುವ ಕುರಿತು ಮಾನ್ಯ ಪ್ರಾಚಾರ್ಯರು ಸಭೆಗೆ ತಿಳಿಸಿದರು.
3. IQAC ಸಂಯೋಜಕರಾದ ಡಾ. ವಿ. ಎಂ. ಭಂಡಾರಿಯವರು ಈ ಭಾರಿ NAAC Peerಸಮಿತಿಯವರು ನೀಡಿದ ಅಂಕಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು ಹಾಗೂ ಅವರು ನೀಡಿರುವ ಸಲಹೆಗಳಲ್ಲಿ ಕಲಿಕಾ ಸೌಲಭ್ಯಗಳ ಕುರಿತು ವಿಶೇಷವಾಗಿ ICT ಕಲಿಕೆಯಲ್ಲಿ ಸುಧಾರಣೆಯಾಗಬೇಕು ಎನ್ನುವುದನ್ನು ವಿವರಿಸಿದರು.
4. IQAC ವಿದ್ಯಾರ್ಥಿನಿ ಪ್ರತಿನಿಧಿಗಳು ತಮ್ಮ ಕಲಿಕೆಗೆ ಸಹಾಯವಾಗುವಂತೆ ಕಂಪ್ಯೂಟರ್ ವಿಭಾಗದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಂಪ್ಯೂಟರ್‍ಗಳು ಅವಶ್ಯವಿರುವುದು ಎಂಬ ಬೇಡಿಕೆಯನ್ನಿಟ್ಟರು.
5. ಮಹಾವಿದ್ಯಾಲಯದ ಎಲ್ಲ ಶಿಕ್ಷಕರು ಗ್ರಂಥಾಲಯದಲ್ಲಿರುವ INFLIBNERT ಸೌಲಭ್ಯವನ್ನು ಸರಿಯಾಗಿ ಬಳಸಿಕೊಳ್ಳುವಂತೆ ಮಾನ್ಯ ಪ್ರಾಚಾರ್ಯರು ಆದೇಶಿಸಿದರು.
6. ಡಾ. ಎ. ವಿ. ಬಾಳಿಗಾ ಕಾಮರ್ಸ್ ಕಾಲೇಜು, ಕುಮಟಾದ ಗ್ರಂಥಪಾಲಕರನ್ನು ಒಮ್ಮೆ ಮಹಾವಿದ್ಯಾಲಯಕ್ಕೆ ಆಮಂತ್ರಿಸಿ, ಅವರಿಂದ ಗ್ರಂಥಾಲಯದ ಸಿಬ್ಬಂದಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಒಂದು ದಿನದ Orientation ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ವಿಚಾರವನ್ನು ಪ್ರಾಚಾರ್ಯರು ಸಭೆಗೆ ತಿಳಿಸಿದರು.
7. Web Libraryಯನ್ನು ಸಕ್ರಿಯವಾಗಿರುವಂತೆ ನೋಡಿಕೊಳ್ಳುವಂತೆ ಗ್ರಂಥಾಲಯದ ಸಿಬ್ಬಂದಿಗಳಿಗೆ ಪ್ರಾಂಶುಪಾಲರು ಆದೇಶಿಸಿದರು.
8. ಪ್ರತಿ ಸೆಮಿಸ್ಟರ್ ಫಲಿತಾಂಶ ಪ್ರಕಟಗೊಂಡ ಕೂಡಲೇ ಫಲಿತಾಂಶದ ವಿಶ್ಲೇಷಣೆಯನ್ನು ಆಯಾ ವಿಭಾಗದವರು ತಯಾರಿಸಿ ಸಾಧ್ಯವಾದಲ್ಲಿ ನೆರೆಯ ಮಹಾವಿದ್ಯಾಲಯಗಳ ಫಲಿತಾಂಶಗಳ ತುಲನಾತ್ಮಕ ವರದಿಯನ್ನು ತಯಾರಿಸಿ ನಿರ್ವಹಿಸುವಂತೆ ಮಾನ್ಯ ಪ್ರಾಚಾರ್ಯರು ಸಭೆಗೆ ತಿಳಿಸಿದರು.
9. ಈಗಿನಿಂದಲೇ AQAR ತಯಾರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಪ್ರಾಚಾರ್ಯರು ಸೂಚಿಸಿದರು. ಅಂತೆಯೇ ಈ ತಯಾರಿಯಲ್ಲಿ ಅವಶ್ಯವಿರುವ ಮಾಹಿತಿಗಳನ್ನು ನಿರಂತರವಾಗಿ ಸಂಗ್ರಹಿಸಿಕೊಳ್ಳುವಂತೆ ತಿಳಿಸಿದರು.
10. ಸ್ವಾಯತ್ತತೆಯ ಪ್ರಸ್ತಾಪವನ್ನು ತಯಾರಿಸುವ ಮುನ್ನ ಈಗಾಗಲೇ ಸ್ವಾಯತ್ತತೆಯನ್ನು ಪಡೆದಿರುವ ಮಹಾವಿದ್ಯಾಲಯಗಳಿಗೆ ಭೇಟಿ ನೀಡಿ ಅದರ ಸಾಧÀಕ ಬಾಧÀಕಗಳನ್ನು ವಿಶ್ಲೇಷಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದು ಎಂದು ತೀರ್ಮಾನಿಸಲಾಯಿತು.
11. 2017-18 ರಿಂದ IQAC ಸಮಿತಿಯಲ್ಲಿ ಎಂ. ಪಿ. ಇ. ಸೊಸೈಟಿಯ ಖಜಾಂಚಿಗಳಾದ ಶ್ರೀಯುತ ಉಮೇಶ ನಾಯ್ಕ ಅವರನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಯಿತು.
12. NAAC ಮೌಲ್ಯಾಂಕನಕ್ಕೆ ಅಗತ್ಯವಿರುವ ಮಹಾವಿದ್ಯಾಲಯದ ವಾರ್ಷಿಕ ಕಾರ್ಯಕ್ರಮಗಳ ಪಟ್ಟಿಯನ್ನು ತಯಾರಿಸಿಕೊಳ್ಳುವ ಕೆಲಸವನ್ನು ಆರಂಭಿಸುವುದಾಗಿ ಡಾ. ವಿ. ಎಂ. ಭಂಡಾರಿಯವರು ಸಭೆಗೆ ತಿಳಿಸಿದರು.
13. ಮಹಾವಿದ್ಯಾಲಯದಲ್ಲಿರುವ Fashion Designing, ಯಕ್ಷಗಾನ, ಮಾನವ ಹಕ್ಕುಗಳು, Enterpreneurship Development, ಬ್ಯಾಂಕಿಂಗ್ ಹಾಗೂ ಸಂಗೀತ ವಿಷಯಗಳAdd-On ಕೋರ್ಸುಗಳನ್ನು ವಿದ್ಯಾರ್ಥಿಗಳಿಂದ ನಿಗದಿತ ಶುಲ್ಕವನ್ನು ತೆಗೆದುಕೊಂಡು ಪ್ರಾರಂಭಿಸುವಂತೆ ಪ್ರಾಚಾರ್ಯರು ಸಭೆಗೆ ತಿಳಿಸಿದರು.
14. ಎಲ್ಲ ವಿಭಾಗಗಳ ಶಿಕ್ಷಕರು ವಿಚಾರ ಸಂಕೀರ್ಣ, ಕಾರ್ಯಾಗಾರ ಹಾಗೂ ವಿಚಾರ ಗೋಷ್ಠಿಗಳನ್ನು ನಡೆಸಲು ಅವಶ್ಯವಿರುವ ಪ್ರಸ್ತಾವನೆಯನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಪ್ರಾಚಾರ್ಯರು ಆದೇಶಿಸಿದರು.
*******************
IQAC ಸಭೆಯ ನಿರ್ಣಯಗಳು
ದಿನಾಂಕ 31-10-2017 ರಂದು ಮಂಗಳವಾರ ಪೂರ್ವಾಹ್ನ 11 ಗಂಟೆಗೆ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಈ ಕೆಳಗಿನಂತಿವೆ.
1. ನಮ್ಮ ಮಹಾವಿದ್ಯಾಲಯದಲ್ಲಿ ಆದಷ್ಟು ಶೀಘ್ರವಾಗಿ IQAC ಅಡಿಯಲ್ಲಿ NAAC ನ ಸಹಯೋಗದೊಂದಿಗೆ “Quality Improvement Mechanism” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ನಡೆಸುವುದೆಂದು ಹಾಗೂ ಈ ಸಂಬಂಧದ ಪ್ರಸ್ತಾವನೆಯನ್ನು ಕಚೇರಿಗೆ ಕಳುಹಿಸಲಾಗುವುದೆಂದು ನಿರ್ಧರಿಸಲಾಯಿತು.
2. “Dr. M. P. Karki Centre of Excellence” ನಲ್ಲಿ ನಡೆಸಬೇಕೆಂದು ತೀರ್ಮಾನಿಸಲಾಗಿದ್ದ KSLET ತರಬೇತಿಗಾಗಿ ಬರುವಂತಹ ಉಪನ್ಯಾಸಕರು ರೂ. 50,000/-ವನ್ನು ತಮ್ಮ remuneration ಎಂದು ಕೇಳಿರುವ ವಿಚಾರವನ್ನು ಮಾನ್ಯ ಪ್ರಾಚಾರ್ಯರು ಸಭೆಗೆ ತಿಳಿಸಿದರು. ಈ ವಿಚಾರವನ್ನು ಸಭೆಯಲ್ಲಿ ಚರ್ಚಿಸಿ, ತರಬೇತಿಗೆ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುವಂತೆ ಮಾಡುವ ಉದ್ದೇಶದಿಂದ ತರಬೇತಿ ಕುರಿತಾದ ಮಾಹಿತಿಯನ್ನು ದಿನಪತ್ರಿಕೆಗಳಲ್ಲಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಜಾಹಿರಾತು ನೀಡುವಂತೆ ಮಾನ್ಯ ಅಧ್ಯಕ್ಷರು ಪ್ರಾಚಾರ್ಯರಿಗೆ ತಿಳಿಸಿದರು. ಇದರೊಂದಿಗೆ ಮಾಹಿತಿಯ ಕರಪತ್ರವನ್ನು ತಯಾರಿಸಿ ಹತ್ತಿರದ ಎಲ್ಲ ಪದವಿ ಮಹಾವಿದ್ಯಾಲಯಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುವಂತೆಯೂ ತಿಳಿಸಿದರು.
ಈ ತರಬೇತಿಯನ್ನು (3 ದಿನಗಳ) ನವೆಂಬರ್ 10, 11 ಮತ್ತು 12 ರಂದು ನಡೆಸುವುದೆಂದು ತೀರ್ಮಾನಿಸಲಾಯಿತು.
3. ಬ್ಯಾಂಕಿಂಗ್ ತರಬೇತಿಯನ್ನು ನಮ್ಮ ಮಹಾವಿದ್ಯಾಲಯದ ಪದವಿ ಕೊನೆಯ ವರ್ಷದಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಪರಿಣಾಮಕಾರಿಯಾಗಿ ಹಾಗೂ ವ್ಯವಸ್ಥಿತರಾಗಿ ನಡೆಸಲು ಬೇಕಾದ ಎಲ್ಲ ತಯಾರಿಗಳನ್ನು ಮಾಡಿಕೊಳ್ಳುವಂತೆ ಮಾನ್ಯ ಅಧ್ಯಕ್ಷರು ಸಭೆಗೆ ತಿಳಿಸಿದರು.
4. CPT ತರಬೇತಿ ಕುರಿತಾದ ಮಾಹಿತಿಯನ್ನು ನಮ್ಮ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿ.ಯು.ಸಿ.ಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡಿ ಆದಷ್ಟು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಈ ತರಬೇತಿಯನ್ನು ಪಡೆದುಕೊಳ್ಳುವಂತೆ ನೋಡಿಕೊಳ್ಳುಲು ಮಾನ್ಯ ಅಧ್ಯಕ್ಷರು ಆದೇಶಿಸಿದರು.
5. ಕೌಶಲ್ಯ ಅಭಿವೃದ್ಧಿ ಹಾಗೂ ಉಧ್ಯಮಶೀಲತೆ ಖಾತೆಯ ಮಂತ್ರಿಗಳಾದ ಮಾನ್ಯ ಅನಂತಕುಮಾರ ಹೆಗಡೆಯವರು ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದಂತೆ ನಮ್ಮ ಜಿಲ್ಲೆಯ ಸರಕಾರಿ ಇಲಾಖೆಗಳ ಅಧಿಕಾರಿಗಳಿಗೆ “Skill Development and Enterpreneurship” ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು IQAC ಅಡಿಯಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.
6. ಶ್ರೀ ಸುರೇಶ ಶೇಟ್ ಅವರನ್ನು IQAC ಯ ಪಾಲಕ ಪ್ರತಿನಿಧಿಯಾಗಿ ಸೇರಿಸಿಕೊಳ್ಳಲು ತೀರ್ಮಾನ ಮಾಡÀಲಾಯಿತು.
7. ಮಹಾವಿದ್ಯಾಲಯದ ಶಿಕ್ಷಕ ಸಿಬ್ಬಂದಿಗಳು ಬೇರೆ ಬೇರೆ ಮಹಾವಿದ್ಯಾಲಯಗಳಲ್ಲಿ ನಡೆಯುವ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರಗಳಲ್ಲಿ ಭಾಗವಹಿಸುವುದನ್ನು ಉತ್ತೇಜಿಸಿಸುವ ಉದ್ದೇಶದಿಂದ ಅಂಥವರಿಗೆ ಕರ್ತವ್ಯನಿರತ ರಜೆಯನ್ನು ನೀಡುತ್ತಿರುವುದಾಗಿ ಪ್ರಾಚಾರ್ಯರು ಸಭೆಗೆ ತಿಳಿಸಿದರು.
8. ಡಾ. ಶಿವರಾಮ ಶಾಸ್ತ್ರಿ, ಸಂಯೋಜಕರು, “Dr. M. P. Karki Centre of Excellence” ಇವರನ್ನು ಮುಂಬರುವ IQAC ಸಭೆಗಳಿಗೆ ಆಹ್ವಾನಿಸುವದೆಂದು ತೀರ್ಮಾನಿಸಲಾಯಿತು.
*******************
IQAC ಸಭೆಯ ನಿರ್ಣಯಗಳು
ದಿನಾಂಕ 25-01-2018 ರಂದು ಮಧ್ಯಾಹ್ನ 3.30 ಗಂಟೆಗೆ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಈ ಕೆಳಗಿನಂತಿವೆ.
1. NAAC ನ ನಿರ್ದೇಶನದಂತೆ IQAC ಸಭೆಯ ನಿರ್ಣಯಗಳನ್ನು ಮಹಾವಿದ್ಯಾಲಯದ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡುವ ಕುರಿತು ಚರ್ಚಿಸಲಾಯಿತು. ಪ್ರೊ. ಸಂತೋಷ ಗುಡಿಗಾರ ಅವರಿಗೆ ವೆಬ್‍ಸೈಟ್‍ನ್ನು ಅಪ್‍ಡೇಟ್ ಮಾಡಲು ಆದೇಶಿಸುವುದು ಎಂದು ತೀರ್ಮಾನಿಸಲಾಯಿತು.
2. ಡಾ. ಎಂ. ಪಿ. ಕರ್ಕಿ ಸೆಂಟರ್ ಫಾರ್ ಎಕ್ಸಲೆನ್ಸ್ & ರಿಸರ್ಚ್ ನಿಂದ ನಡೆಯುತ್ತಿರುವ ತರಬೇತಿಗಳ ಕುರಿತ ಸಮಗ್ರ ಮಾಹಿತಿಗಳನ್ನು ಸುತ್ತ ಮುತ್ತಲಿನ ಎಲ್ಲ ಹೈಸ್ಕೂಲ್‍ಗಳಿಗೆ ಖುದ್ದಾಗಿ ಭೇಟಿ ನೀಡಿ ಪೂರೈಸಿರುವುದಾಗಿ ಡಾ. ಶಿವರಾಂ ಶಾಸ್ತ್ರಿಯವರು ಸಭೆಗೆ ತಿಳಿಸಿದರು.
3. ದಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಅವಶ್ಯವಿರುವ ಮೂಲ ವಿಷಯಗಳ (Chemistry, Maths and Physics) ತರಬೇತಿ ನೀಡುವವರ ಕುರಿತು ಮಾಹಿತಿ ಪಡೆಯುವಂತೆ ಡಾ. ಶಿವರಾಮ ಶಾಸ್ತ್ರಿ ಯವರಿಗೆ ತಿಳಿಸಲಾಯಿತು.
4. CPT ತರಬೇತಿ ನೀಡಲು ಒಪ್ಪಿಕೊಂಡಿರುವ ಪ್ರೊ. ಜಿ. ಪಿ. ಹೆಗಡೆ, ಡಾ. ವಿ. ಎಂ. ಭಂಡಾರಿ ಹಾಗೂ ಪ್ರೊ. ವಿನೋದ ಹೆಗಡೆ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಹೊನ್ನಾವರ ಇವರುಗಳು ತರಬೇತಿಗೆ ಭೇಕಾಗುವ ಸಕಲ ಸಿದ್ದತೆಗಳನ್ನು ಮಾಡಿಕೊಂಡು ಈ ವರ್ಷವೇ ತರಬೇತಿಯನ್ನು ಪ್ರಾರಂಭಿಸುವಂತೆ ಮಾನ್ಯ ಅಧ್ಯಕ್ಷರು ಸಲಹೆ ನೀಡಿದರು.
5. ಫೆಬ್ರುವರಿ 3 ರಂದು ನಡೆಯಲಿರುವ “ಸ್ಕಿಲ್ಲೊಥಾನ್” ಕಾರ್ಯಕ್ರಮ ಹಾಗೂ ಉದ್ಯೋಗ ಮೇಳಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ಮಾನ್ಯ ಪ್ರಾಚಾರ್ಯರು ಸಭೆಗೆ ತಿಳಿಸಿದರು.
6. ಶ್ರೀ ತಿಮ್ಮಪ್ಪ ಎ. ಪೈ (ರಾಘವ ಪೈ) ಹಾಗೂ ಶ್ರೀ ಪತಾಂಜಲಿ ವೀಣಾಕರ್ ಅವರನ್ನು ವಿದ್ಯಾರ್ಥಿ ಪಾಲಕ ಪ್ರತಿನಿಧಿಯಾಗಿ ಜಿ. ಸಿ. ಸಮಿತಿಯಲ್ಲಿ ನಾಮ ನಿರ್ದೇಶನ ಮಾಡುವುದೆಂದು ತೀರ್ಮಾನಿಸಲಾಯಿತು.
7. ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನೀಡುತ್ತಿರುವ ತರಬೇತಿಯನ್ನು ನೀಡಲು ಬರಬಹುದಾದ ಸಂಪನ್ಮೂಲ ವ್ಯಕ್ತಿಗಳೊಂದಿಗೆ ನೇರವಾಗಿ ಚರ್ಚಿಸಿ, ತರಬೇತಿಯ ಅವಧಿ ಹಾಗೂ ಶುಲ್ಕಗಳನ್ನು ಕುರಿತು ತೀರ್ಮಾನ ತೆಗೆದುಕೊಳ್ಳುವಂತೆ ಮಾನ್ಯ ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.
*******************
IQAC ಸಭೆಯ ನಿರ್ಣಯಗಳು
ದಿನಾಂಕ 28-03-2018 ರಂದು ಮುಂಜಾನೆ 11.00 ಗಂಟೆಗೆ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಈ ಕೆಳಗಿನಂತಿವೆ.
1. ಮಹಾವಿದ್ಯಾಲಯದಲ್ಲಿ ಡಾ. ಎಂ. ಪಿ. ಕರ್ಕಿ Institute of Potential Excellence & Research Centre ನಲ್ಲಿ ನಡೆಸಬೇಕೆಂದು ಈ ಮೊದಲು ತಿರ್ಮಾನಿಸಿದ್ದ CPT Foundation Course ನ್ನು ಸಕಲ ಸಿಧ್ಧತೆಗಳೊಂದಿಗೆ ಸಾಕಷ್ಟು ಪ್ರಚಾರ ನೀಡಿ ಎಪ್ರಿಲ್ 2019 ರಿಂದ ಪ್ರಾರಂಭಿಸುವುದು. ಈ ತರಬೇತಿಯನ್ನು 5000/-ರೂ.ಗಳ ಶುಲ್ಕದೊಂದಿಗೆ ನಡೆಸುವುದು. ಹಾಗೂ ಅಂತಿಮ ಸೆಮಿಸ್ಟರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮೇ-2019 ರಿಂದ ಬ್ಯಾಂಕಿಂಗ್ ಕೋಚಿಂಗ್ (Banking Coaching) ತರಬೇತಿಗಳನ್ನು ನಡೆಸುವುದೆಂದು ನಿರ್ಣಯಿಸಲಾಯಿತು. ಇದಕ್ಕೆ ಬೇಕಾಗುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಡಾ.ವಿ.ಎಂ.ಭಂಡಾರಿಯವರು ಡಾ. ಶಿವರಾಂ ಶಾಸ್ತ್ರಿಯವರಿಗೆ ತಿಳಿಸಿದರು.
2. ಮಹಾವಿದ್ಯಾಲಯದಲ್ಲಿ ನಡೆಸುವ ಎಲ್ಲ ಕಾರ್ಯಕ್ರಮಗಳನ್ನು ವಿಡಿಯೋ ತಯಾರಿಸಿ ದಾಖಲಿಸಿಡುವುದು.
3. ‘ಮಳೆ ನೀರು ಕೊಯ್ಲು’ ಮಾಡುವುದಕ್ಕಾಗಿ ನಮ್ಮ ಮಹಾವಿದ್ಯಾಲಯದ ಪ್ರಸ್ತಾವನೆಯನ್ನು ತಯಾರಿಸಿ ಸರಿಯಾದ ಮಾರ್ಗದಲ್ಲಿ ಕಳುಹಿಸಬಹುದೆಂದು ಪ್ರಾಚಾರ್ಯರು ಸಭೆಗೆ ತಿಳಿಸಿದರು.
4. ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ. ಆರ್.ಕೆ.ಮೇಸ್ತ ಅವರು ಮಹಾವಿದ್ಯಾಲಯದಲ್ಲಿ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ನಡೆಯುವ ‘ಅಥ್ಲೆಟಿಕ್ ಮೀಟ್’ ವಿಚಾರವನ್ನು ತಿಳಿಸಿದರು. ಹಾಗೂ 3 ದಿನಗಳ ವರೆಗೆ ನಡೆಯುವ ಈ ಕ್ರೀಡಾ ಚಟುವಟಿಕೆಗಳಿಗೆ ಬೇಕಾಗುವ ಹಣಕಾಸಿನ ಸೌಲಭ್ಯದ ಕುರಿತು (ಅಂದಾಜು ಮೊತ್ತ 1,00,000/-) ಚರ್ಚಿಸಲಾಯಿತು.
5. ಮಹಾವಿದ್ಯಾಲಯದ ದಿನನಿತ್ಯದ ಕಸದ ನಿರ್ವಹಣೆಯ ವಿಚಾರವನ್ನು ಚರ್ಚಿಸಲಾಯಿತು ಮತ್ತು ಹೊನ್ನಾವರದ ಪಟ್ಟಣ ಪಂಚಾಯತದ ಸ್ವಚ್ಛತಾ ತಪಸಣಾಧಿಕಾರಿಯವರನ್ನು ಸಂಪರ್ಕಿಸಿ ಕಸದ ವಿಲೇವಾರಿಯ ಕುರಿತು ತಿಳಿಸಲಾಯಿತು.
6. Selco Solar System Ltd ನವರ ಸಹಾಯದಿಂದ ಗಿಡಗಳಿಗೆ ನಿರಂತರವಾಗಿ ನೀರನ್ನು ಹರಿಸುವ ತಂತ್ರಜ್ಞಾನವನ್ನು ನಮ್ಮ ಮಹಾವಿದ್ಯಾಲಯದಲ್ಲಿ ಅಳವಡಿಸುವ ಕುರಿತು ಪ್ರಾಚಾರ್ಯರು ಮಾಹಿತಿ ನೀಡಿದರು.