ಕ್ಯಾಂಪಸ್ ಸಂದರ್ಶನ 

ದಿನಾಂಕ 06-07-2019 ಶನಿವಾರದಂದು ನಮ್ಮ ಮಹಾವಿದ್ಯಾಲಯದ ‘ಪ್ಲೇಸ್‍ಮೆಂಟ್ ಸೆಲ್’ ಆಶ್ರಯದಲ್ಲಿ ಉತ್ತರ ಕನ್ನಡದ ಜಿಲ್ಲಾ ಮಟ್ಟದ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಗಿದೆ.

ಮಂಗಳೂರು ಮೂಲದ ‘DIYA SYSTEMS’ ಎನ್ನುವ ಕಂಪನಿಯು ತಾಂತ್ರಿಕ ಹುದ್ದೆಗಳಿಗಾಗಿ ಸಂದರ್ಶನ ನಡೆಸಲಿದೆ. 100 ಹುದ್ದೆಗಳ ಅವಶ್ಯಕತೆ ಇರುತ್ತಿದ್ದು, ರೂ. 15,000 ದಿಂದ 17000 ಸಂಬಳ ನೀಡಲಾಗುವುದು ಹಾಗೂ ಆಯ್ಕೆಯಾದ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಉತ್ತರ ಕನ್ನಡ ಜಿಲ್ಲೆಯ ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ, ಬಿ.ಸಿ.ಎ. ಎಂ.ಸಿ.ಎ ಎಂ.ಕಾಂ, ಎಂ.ಎಸ್ಸಿ ಹಾಗೂ ಬಿ.ಇ. ಪದವಿ ಹೊಂದಿದ ಆಸಕ್ತ ಅಬ್ಯರ್ಥಿಗಳು ಹಾಜರಾಗಬಹುದು. ಅಬ್ಯರ್ಥಿಗಳು ಆಂಗ್ಲ ಭಾಷೆಯಲ್ಲಿ ಸಂವಹನ ಕೌಶಲ್ಯ ಮತ್ತು ಕಂಪ್ಯೂಟರ್ ಪ್ರಭುತ್ವ ಹೊಂದಿರುವುದು ಅಗತ್ಯವಾಗಿದೆ.

ಆಸಕ್ತ ಅಬ್ಯರ್ಥಿಗಳು ತಮ್ಮ ಬಯೋಡಾಟಾ ಮತ್ತು ಮೂಲ ದಾಖಲೆಗಳೊಂದಿಗೆ ಮುಂಜಾನೆ 9.30 ಗಂಟೆಗೆ ಕಾಲೇಜಿನಲ್ಲಿ ಹಾಜರಿರಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಪ್ಲೇಸ್‍ಮೆಂಟ್ ಅಧಿಕಾರಿ ಡಾ. ಡಿ.ಎಲ್. ಹೆಬ್ಬಾರ (9448435061) ಅಥವಾ ಲಕ್ಮೀಶ ಭಟ್ಟ ‘Diya Systems’ ಮಂಗಳೂರು (9741009937) ಇವರನ್ನು ಸಂಪರ್ಕಿಸಬಹುದು.

ಆಸಕ್ತರು ದಿನಾಂಕ 05-07-2019 ರ ಸಂಜೆ 5.30 ರೊಳಗೆ ಪೋನ್ ಮುಖಾಂತರ ನೊಂದಾಯಿಸಿಕೊಳ್ಳಲು ಸೂಚಿಸಿದೆ.

About The Author

Related Posts