ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯ, ಹೊನ್ನಾವರದಲ್ಲಿ ಎನ್.ಎಸ್.ಎಸ್. ಘಟಕ ಮತ್ತು ರೇಂಜರ್ ರೋವರ್ಸ್ ವತಿಯಿಂದ ಸದ್ಭಾವನಾ ದಿನಾಚರಣೆ

ವಿವಿಧ ಭಾಷೆ ಧರ್ಮ ಜಾತಿ ಸಂಪ್ರದಾಯಗಳಿಂದ ಕೂಡಿದ ಭಾರತದಂತಹ ದೇಶದಲ್ಲಿ ಸೌಹಾರ್ದಯುತ ಸದ್ಭಾವನೆಯನ್ನು ಬೆಳೆಸಿಕೊಂಡು ಸಂವಿಧನದ ಚೌಕಟ್ಟಿನಲ್ಲಿ ಸಾಮರಸ್ಯದಿಂದ ಬದುಕಿದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಡಾ. ಎಂ. ಆರ್. ನಾಯಕರವರು ಅಭಿಪ್ರಾಯ ಪಟ್ಟರು. ಅವರು ಸ್ಥಳೀಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯವು ಎನ್.ಎಸ್.ಎಸ್. ಘಟಕ ಮತ್ತು ರೇಂಜರ್ಸ್ ಹಾಗೂ ರೋವರ್ಸ್ ವತಿಯಿಂದ ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿಯವರ ಜನ್ಮ ದಿನದ ಅಂಗವಾಗಿ ಏರ್ಪಡಿಸಿದ್ದ ಸದ್ಭಾವನಾ ದಿನಾಚರಣೆಯಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ಜಿ. ಎಸ್. ಹೆಗಡೆಯವರು ಪ್ರಾಸ್ಥಾವಿಕ ಮಾತನಾಡಿ ಸಮಸ್ತರನ್ನು ಸ್ವಾಗತಿಸಿದರು. ರೇಂಜರ್ ಲೀಡರ್‍ರಾದ ಶ್ರೀಮತಿ ಲತಾ ಆರ್.ರವರು ಸದ್ಭಾವನಾ ಪ್ರತಿಜ್ಞೆಯನ್ನು ಬೋಧಿಸಿದರು. ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ಎಮ್. ನಾಯ್ಕರವರು ಅಧ್ಯಕ್ಷತೆ ವಹಿಸಿದ್ದರು. ಕು. ಮಧುರಾ ಪೈ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಎನ್.ಎಸ್.ಎಸ್. ಮತ್ತು ರೋವರ್ ಹಾಗೂ ರೇಂಜರ್ ಸ್ವಯಂಸೇವಕರು ಹಾಗೂ ಇತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Related Posts