ಯುವಜನೋತ್ಸವದಲ್ಲಿ ಎಸ್.ಡಿ.ಎಂ ಪ್ರಥಮದರ್ಜೆ ಮಹಾವಿದ್ಯಾಲಯಕ್ಕೆ ‘ಸಮಗ್ರ ವೀರಾಗ್ರಣಿ ಪ್ರಶಸ್ತಿ’

ಕಾರವಾರದ ಶಿವಾಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅಕ್ಟೋಬರ್ 11 ಮತ್ತು 12 ರಂದು ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಉತ್ತರ ಕನ್ನಡ ಜಿಲ್ಲಾ ವಲಯಮಟ್ಟದ ಯುವಜನೋತ್ಸವದಲ್ಲಿ ಹೊನ್ನಾವರದ ಎಸ್.ಡಿ.ಎಂ ಪ್ರಥಮದರ್ಜೆ ಮಹಾವಿದ್ಯಾಲಯವು ಚಾಂಪಿಯನ್‍ಶಿಪ್ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ. 2017-18 ಮತ್ತು 2018-19 ರಲ್ಲಿಯೂ ನಮ್ಮ ಮಹಾವಿದ್ಯಾಲಯವು ಚಾಂಪಿಯನ್‍ಶಿಫ್ ಪ್ರಶಸ್ತಿಯನ್ನು ಪಡೆದಿದ್ದು ಸತತ 3 ವರ್ಷಗಳಿಂದ ಈ ಸಾಧನೆಯನ್ನು ಮಾಡಿರುವುದು ವಿಶೇಷವಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದ ಅಂತರ್ ಜಿಲ್ಲಾ ವಲಯಮಟ್ಟದ (ಉತ್ತರ-ಕನ್ನಡ, ಗದಗ, ಧಾರವಾಡ, ಬೆಳಗಾಂವ ಜಿಲ್ಲೆಗಳು) ಯುವಜನೋತ್ಸವದಲ್ಲಿ ಭಾಗವಹಿಸಲು ನಮ್ಮ ಮಹಾವಿದ್ಯಾಲಯವು ಅರ್ಹತೆಯನ್ನು ಪಡೆದುಕೊಂಡಿರುತ್ತದೆ. ಈ ಸಾಧನೆಗಳಿಗೆ ನಿರಂತರವಾಗಿ ನಮ್ಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ತರಬೇತಿಗಳನ್ನು ನೀಡಿದ ಶಿಕ್ಷಕರ ಶ್ರಮವೂ ಕಾರಣವಾಗಿದ್ದು ವಿದ್ಯಾರ್ಥಿಗಳ ಪರಿಶ್ರಮವೂ ಹೆಚ್ಚಿನದ್ದಾಗಿದೆ. ಈ ಸಾಧನೆಗೆ ಘನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ವಿಶೇಷವಾದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

About The Author

Related Posts