‘ಚಾಣಾಕ್ಯ’ ಅರ್ಥಶಾಸ್ತ್ರ ವೇದಿಕೆ

ಖಾಸಗೀ ಬ್ಯಾಂಕುಗಳಲ್ಲಿ ಉದ್ಯೋಗಾವಕಾಶ

 

ದಿನಾಂಕ 03-01-2020 ಶುಕ್ರವಾರ ದಂದು ನಗರದ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ‘ಚಾಣಾಕ್ಯ-ಅರ್ಥಶಾಸ್ತ್ರ ವೇದಿಕೆಯ ಆಶ್ರಯದಲ್ಲಿ ಪದವಿ ತರಗತಿಯ ಅಂತಿಮ ಸೆಮಿಸ್ಟರ್‍ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ “ಕರಿಯರ್ ಇನ್ ಪ್ರೈವೇಟ್ ಸೆಕ್ಟರ್ ಬ್ಯಾಂಕಿಂಗ್” ಎನ್ನುವ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಯಿತು. ಮಂಗಳೂರಿನ ಓIIಖಿ ಕೇಂದ್ರದ ಮ್ಯಾನೇಜರ್ ಶ್ರೀಮತಿ ಪವಿತ್ರಾ ಹಾಗು ವಿಕಾಸ ರವರು ಖಾಸಗೀ ಬ್ಯಾಂಕಿಂಗ್‍ಗಳಲ್ಲಿನ ಆಯ್ಕೆ ಮತ್ತು ಅವಕಾಶಗಳ ಕುರಿತು ಪಿ.ಪಿ.ಟಿ. ಮುಖಾಂತರ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಸರಕಾರಿ ಸಾಮ್ಯದ ಬ್ಯಾಂಕುಗಳಲ್ಲಿ ಇಂದು ಅವಕಾಶಗಳು ಕಡಿಮೆ ಆಗುತ್ತಿದ್ದು, ಖಾಸಗೀ ಬ್ಯಾಂಕುಗಳು ಗಣನೀಯವಾಗಿ ಬೆಳವಣಿಗೆ ಹೊಂದುತ್ತಿರುವುದರಿಂದ ಯುವಕರಿಗೆ ಹೇರಳ ಅವಕಾಶವಿದೆ ಎಂದು ವಿವರಿಸಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಎಸ್.ಎಂ. ಭಟ್ಟರವರು ದೀಪಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ತಮ್ಮ ಬ್ಯಾಂಕಿಂಗ್ ಜೀವನದ ಅನುಭವ ಹಂಚಿಕೊಂಡರಲ್ಲದೇ ಕಾಲೇಜಿನಲ್ಲಿ ಇಂತಹ ಸಂಘಟನೆಗಳು ಸಂಘಟಿಸುವ ಕಾರ್ಯಕ್ರಮಗಳ ಸಂಪೂರ್ಣ ಉಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ ವಿಜಯಲಕ್ಷ್ಮಿ ನಾಯ್ಕರವರು ವಹಿಸಿ ಸಾರ್ವಜನಿಕ ವಲಯದ ಬ್ಯಾಂಕುಗಳ ಆಯ್ಕೆಯಲ್ಲಿ ವಿಫಲರಾದ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಗಳಲ್ಲಿ ಖಾಸಗೀ ಬ್ಯಾಂಕುಗಳಲ್ಲಿ ಆಯ್ಕೆಯಾಗಿ ಜೀವನ ರೂಪಿಸಿಕೊಳ್ಳಲು ಕರೆ ನೀಡಿದರು. ವೇದಿಕೆಯ ಸಂಚಾಲಕರಾದ ಡಾ. ಡಿ. ಎಲ್. ಹೆಬ್ಬಾರ ಸರ್ವರನ್ನು ಸ್ವಾಗತಿಸಿ ವೇದಿಕೆಯ ಗಣ್ಯರನ್ನು ಪರಿಚಯಿಸಿದರಲ್ಲದೇ ಓIIಖಿಯವರು ಖಾಸಗೀ ಬ್ಯಾಂಕುಗಳ ವಿವಿಧ ಹುದ್ದೆಗಳ ಆಯ್ಕೆಗಾಗಿ ವರ್ಷದ ಕೊನೆಯಲ್ಲಿ ಪುನಃ ಕಾಲೇಜಿಗೆ ಆಗಮಿಸಲಿದ್ದಾರೆ ಎನ್ನುವುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ವೇದಿಕೆಯ ಈ ಸಾಲಿನ ಅಧ್ಯಕ್ಷೆ ಅಕ್ಷತಾ ಪೈ ಸರ್ವರನ್ನು ವಂದಿಸಿದರು. ಪ್ರತಿಭಾ ಹೆಗಡೆ ಪ್ರಾರ್ಥಿಸಿದರು. ಅರ್ಥಶಾಸ್ತ್ರ ವೇದಿಕೆಯ ಎಲ್ಲಾ ಪ್ರತಿನಿಧಿಗಳು ಮತ್ತು ಸದ್ಯರು ಉಪಸ್ಥಿತರಿದ್ದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಪ್ರೊ. ರೋಹಿತ್ ಡಿಸಿಲ್ವಾ ಮತ್ತು ಪ್ರೊ. ಸಾವಿತ್ರಿ ಕಾರ್ಯಕ್ರಮ ಸಂಘಟಿಸಲು ನೆರವಾದರು.

About The Author

Related Posts