ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪ್ರಸನ್ನ ಚಂದ್ರಕಾಂತ ಶೇಟ್ ರವರ ಕಿರು ಪ್ರತಿಕೃತಿಗಳು ಈಗ ಹಲವು ದಾಖಲೆಗಳ ಪುಟ ಸೇರಿದೆ.

ಇವರು ತಯಾರಿಸಿದ 53 ಮಿಲಿ ಗ್ರಾಂ ತೂಕದ ಚಿನ್ನದ ಅಮರ್ ಜವಾನ ಜ್ಯೋತಿ 1 ಸೆಂಟಿಮೀಟರ್ ಎತ್ತರವಿದ್ದು ಅದು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ.

ಗಾಂಧೀಜಿಯವರ 150ನೇ ಹುಟ್ಟು ಹಬ್ಬದ ಅಂಗವಾಗಿ ಅತೀ ಸೂಕ್ಷ್ಮವಾದ ತಯಾರಿಸಿದ 150 ಮಿ.ಗ್ರಾಂ. ಚಿನ್ನದ ಚಾಲನೆಯಲ್ಲಿರುವ ‘ಚರಕ’ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ಮತ್ತು ‘ಏಷಿಯಾ ಬುಕ್ ಆಫ್ ರೆಕಾರ್ಡ್’ ನಲ್ಲಿ ದಾಖಲಾಗಿದೆ. ಇದರ ಎತ್ತರ 5 ಮಿಲಿ ಮೀಟರ್ ಹಾಗೂ ಅಗಲ 8 ಮಿಲಿ ಮೀಟರ್ ಆಗಿದ್ದು ಇದನ್ನು ಚಾಲನೆ ಮಾಡಬಹುದಾಗಿದೆ.

ಇವರ ಇನ್ನೊಂದು ಪ್ರತಿಕೃತಿ ಚಿನ್ನದ ರಾಷ್ಟ್ರಧ್ವಜ ಮತ್ತು ಧ್ವಜಕಂಭ 8 ಮಿ. ಗ್ರಾಂ. ತೂಕದಾಗಿದ್ದು 4 ಮಿಲಿ ಮೀಟರ್ ಎತ್ತರವಿದೆ. ಇದು ರಾಷ್ಟ್ರಧ್ವಜದ ಅನುಪಾತದಲ್ಲಿದ್ದು ಬಂಗಾರದ ದಾರವನ್ನು ಬಳಸಿ ಗಂಟುಗಳ ಮೂಲಕ ಕಟ್ಟಲಾಗಿದ್ದು ಇದು ‘ಇಂಟರ್ ನಾಷನಲ್ ಬುಕ್ ಆಫ್ ರೆಕಾರ್ಡ್’ನ ಪುಟ ಸೇರಿ ವಿಶ್ವ ದಾಖಲೆಯಾಗಿದೆ.

ಇವರ ಮೊಟ್ಟ ಮೊದಲ ಪ್ರತಿಕೃತಿ ಚಿನ್ನದ ವಿಶ್ವಕಪ್ ಟ್ರೋಫಿ ಯ ಮಾದರಿ 6 ಮಿಲಿ ಗ್ರಾಂ ತೂಕವಿದ್ದು 2 ಮಿಲಿ ಮೀಟರ್ ಎತ್ತರವಿದ್ದು ವಿಶ್ವ ದಾಖಲೆಯ ಪುಟ ಸೇರಲಿದೆ.

ಇವರು ಹೊನ್ನಾವರದ ಎಸ್. ಡಿ. ಎಮ್ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರಾಗಿದ್ದು, ಹೊನ್ನಾವರದ ಮಾರುತಿ ಪ್ರಸನ್ನ ಜ್ಯೂವೆಲ್ಲರಿಯ ಮಾಲೀಕರಾದ ಚಂದ್ರಕಾಂತ ಶೇಟ್ ಮತ್ತು ಶೋಭಾ ದಂಪತಿಗಳ ಪುತ್ರ.

About The Author

Related Posts