ಸ್ಥಳೀಯ ಎಂ. ಪಿ. ಇ. ಸೊಸೈಟಿಯ ಎಸ್.ಡಿ.ಎಂ. ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹೊನ್ನಾವರ ಇದರ 2021-22 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನವನ್ನು ದಿನಾಂಕ 11-06-2022 ರ ಶನಿವಾರ ಮುಂಜಾನೆ 10 ಗಂಟೆಗೆ ಆಯೋಜಿಸಲಾಗಿದೆ.

                        ಸಭಾ ಕಾರ್ಯಕ್ರಮದಲ್ಲಿ ಡಾ. ರವಿ ಹೆಗಡೆ, ಹೂವಿನಮನೆ, ನ್ಯಾಯವಾದಿಗಳು, ಸಿದ್ಧಾಪುರ ಇವರು ಉದ್ಘಾಟಕರಾಗಿ, ಡಾII ನಜೀಮ್ ಜಾವೇದ್ ಖಾನ್, ಅಂತರಾಷ್ಟ್ರೀಯ ಕ್ರೀಡಾಪಟು, ಕುಮಟ ಇವರು ಅತಿಥಿಗಳಾಗಿ ಆಗಮಿಸಲಿದ್ದಾರೆ.

                       ಶ್ರೀ ಕೃಷ್ಣಮೂರ್ತಿ ಭಟ್ಟ, ಶಿವಾನಿ ಅಧ್ಯಕ್ಷರು, ಎಂ.ಪಿ.ಇ. ಸೊಸೈಟಿ ಹೊನ್ನಾವರ ಇವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ನಾಯ್ಕ ಇವರು ವಹಿಸಲಿದ್ದಾರೆ .

                      ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.
                                                               ಸರ್ವರಿಗೂ ಆತ್ಮೀಯ ಸ್ವಾಗತ.