Important

All INDIA NAU SAINIK CAMP – 2019

2019 ನೇ ಸಾಲಿನ ಅಖಿಲ ಭಾರತ ನೌಸೈನಿಕ ಶಿಬಿರವು ಕಳೆದ ಹತ್ತು ದಿನಗಳಲ್ಲಿ ಅಕ್ಟೋಬರ್ ಎರಡರಿಂದ ಹನ್ನೆರಡರವರೆಗೆ ಸೀಮಾಂಧ್ರದ ವಿಶಾಖಪಟ್ಟಣದಲ್ಲಿ ನಡೆಯಿತು.

8 KAR NAVAL UNIT NCC, ಕಾರವಾರದ ಕಮಾಂಡಿಂಗ್ ಅಧಿಕಾರಿಗಳಾದ Capt ನಜಮುಲ್ ಹುಡಾರ ಮಾರ್ಗದರ್ಶನದಲ್ಲಿ ಕೆಡೆಟ್ಗಳಿಗೆ ತೀವೃತರ ತರಬೇತಿಯನ್ನು ನೀಡಲಾಯಿತು.

ಕರ್ನಾಟಕ ಮತ್ತು ಗೋವಾ ಪ್ರದೇಶದ ವಿವಿಧ ಭಾಗಗಳಿಂದ ಆಗಮಿಸಿದ ಒಟ್ಟೂ 36 ಜನರಿದ್ದ ತಂಡಕ್ಕೆ , ಹೊನ್ನಾವರ ಶ್ರೀ ಧ ಮಂ ಕಾಲೇಜಿನ ಪ್ರಾಧ್ಯಾಪಕ, Sub Lt. ಸಂತೋಷ ಗುಡಿಗಾರರು (ಕಂಟಿಂಜಂಟ್ ಕಮಾಂಡರ್) ಕೆಡೆಟ್‍ಗಳನ್ನು ಹುರಿದುಂಬಿಸಿ ಘಟಕವು ವಿಶೇಷ ಸಾಧನೆ ಮಾಡುವಲ್ಲಿ ಪ್ರಧಾನ ಪಾತ್ರವಹಿಸಿದ್ದರು.

ನೌಸೇನೆಗೆ ಸಂಬಂಧಪಟ್ಟ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ತಂಡವು ಅನೇಕ ಪುರಸ್ಕಾರಗಳನ್ನು ಪಡೆಯಿತು.

Sub Lt.  ಸಂತೋಷ ಗುಡಿಗಾರರು ಎನ್ಸಿಸಿ, ನವದೆಹಲಿಯ ಡೈರೆಕ್ಟರ್ ಜನರಲ್, Lt Gen. ರಾಜೀವ್ ಚೋಪ್ಡಾ ಅವರಿಂದ Commendation Award ಸ್ವೀಕರಿಸಿದರು.

ಕರ್ನಾಟಕ-ಗೋವಾ ಬಾಲಕಿಯರ ತಂಡದ ನೇತೃತ್ವವನ್ನು ಕ್ಯಾಪ್ಟನ್ ಕೆಡೆಟ್ ಶಾಝಿಯಾ ಶೇಖ್ ಅವರೂ, ಬಾಲಕರ ತಂಡದ ನೇತೃತ್ವವನ್ನು ಎಸ್ ಡಿ ಎಮ್ ಕಾಲೇಜು ಹೊನ್ನಾವರದ ಲೀಡಿಂಗ್ ಕೆಡೆಟ್ ನಾಗೇಶ ಜೆ ನಾಯ್ಕಅವರೂ ವಹಿಸಿದ್ದರು.

2019ನೇ ಸಾಲಿನ ಅಖಿಲ ಭಾರತ ನೌಸೈನಿಕ ಶಿಬಿರದಲ್ಲಿ ತಮ್ಮ ಕೆಡೆಟ್ಗಳು ಮಾಡಿದ ಈ ಅನುಪಮ ಸಾಧನೆಗಾಗಿ 8 KAR NAVAL UNIT NCC, ಕಾರವಾರದ ಕಮಾಂಡಿಂಗ್ ಅಧಿಕಾರಿಗಳು ಮತ್ತು ಎಲ್ಲ ಪಿಆಯ್ ಸಿಬ್ಬಂದಿಗಳು, ಎಸ್ ಡಿ ಎಮ್ ಕಾಲೇಜು ಹೊನ್ನಾವರದ ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ವರ್ಗದವರು ಪ್ರಶಸ್ತಿ ವಿಜೇತ ಅಧ್ಯಾಪಕ ಮತ್ತು ವಿದ್ಯಾರ್ಥಿಗಳನ್ನು ಹೃತ್ಪೂರ್ವಕ ಅಭಿನಂದಿಸಿದ್ದಾರೆ.

error: Content is protected !!