“ಹಸಿರು ಚಾಂಪಿಯನ್” ಆಗಿ ಎಸ್.ಡಿ.ಎಮ್ ಆಯ್ಕೆ

ಹೊನ್ನಾವರದ ಪ್ರತಿಷ್ಠಿತ ಎಮ್.ಪಿ.ಇ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯಕ್ಕೆ ಭಾರತ ಸರಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಶಿಕ್ಷಣ ಪರಿಷತ್, ಉನ್ನತ ಶಿಕ್ಷಣ ವಿಭಾಗ, ಶಿಕ್ಷಣ ಮಂತ್ರಾಲಯ ಇವರು 2021-22 ನೇ ಶೈಕ್ಷಣಿಕ ಸಾಲಿನ “ಉತ್ತರ ಕನ್ನಡ ಜಿಲ್ಲೆಯ ಹಸಿರು ಚಾಂಪಿಯನ್” ಎಂದು ಆಯ್ಕೆ ಮಾಡಿರುತ್ತಾರೆ. ಈ ಪ್ರಶಸ್ತಿಯು ಪ್ರಶಸ್ತಿ ಪತ್ರ ಹಾಗೂ ನಗದು 5000 ವನ್ನು ಒಳಗೊಂಡಿದೆ.

ಮಹಾವಿದ್ಯಾಲಯದಲ್ಲಿ ಅಳವಡಿಸಿರುವ ಹಸಿರು ಯೋಜನೆಗಳು ಹಾಗೂ ಅದರ ನಿರ್ವಹಣೆಯಲ್ಲಿ ತೋರಿರುವ ಗಮನಾರ್ಹ ಸಾಧನೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿ ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.

 

MGNCRE_DGC Certificate 2021-22-53 (1)