ಸೂಚನೆ

          

        ಈ ಶೈಕ್ಷಣಿಕ ಸಾಲಿನ ಬಿ.ಎ./ಬಿ.ಎಸ್ಸಿ./ಬಿ.ಕಾಂ./ ಬಿ.ಬಿ.ಎ./ಬಿ.ಸಿ.ಎ. 6 ನೇ ಸೆಮಿಸ್ಟರ್‍ನ ದ್ವಿತೀಯ ಆಂತರಿಕ ಮೌಲ್ಯಮಾಪನ ಪರೀಕ್ಷೆಯನ್ನು ದಿನಾಂಕ 02-09-2020, ರಿಂದ 04-09-2020 ರ ಮುಂಜಾನೆಯ ಅವಧಿಯಲ್ಲಿ ನಡೆಸುವುದೆಂದು ತೀರ್ಮಾನಿಸಲಾಗಿದ್ದು, ಪರೀಕ್ಷೆಯು 20 ಅಂಕಗಳ ಒಂದು ತಾಸಿನ ಅವಧಿಯದಾಗಿರುತ್ತದೆ. ಎಲ್ಲಾ ವಿದ್ಯಾರ್ಥಿಗಳು ಲಗತ್ತಿಸಿದ ವೇಳಾಪತ್ರಿಕೆಯಂತೆ ಕಡ್ಡಾಯವಾಗಿ ಪರೀಕ್ಷೆಗೆ ಹಾಜರಾಗತಕ್ಕದ್ದು.

TimeTable 1

       ಈ ಶೈಕ್ಷಣಿಕ ಸಾಲಿನ ಬಿ.ಎ./ಬಿ.ಎಸ್ಸಿ./ಬಿ.ಕಾಂ./ ಬಿ.ಬಿ.ಎ./ಬಿ.ಸಿ.ಎ. 6 ನೇ ಸೆಮಿಸ್ಟರ್‍ನ ಪ್ರಥಮ ಆಂತರಿಕ ಮೌಲ್ಯಮಾಪನ ಪರೀಕ್ಷೆಯನ್ನು ದಿನಾಂಕ 04-09-2020 ರ ಮಧ್ಯಾಹ್ನ ಹಾಗೂ 05-09-2020 (ಪೂರ್ಣ ದಿನ) ದ ಅವಧಿಯಲ್ಲಿ ನಡೆಸುವುದೆಂದು ತೀರ್ಮಾನಿಸಲಾಗಿದ್ದು, ಪರೀಕ್ಷೆಯು 20 ಅಂಕಗಳ ಒಂದು ತಾಸಿನ ಅವದಿಯದಾಗಿರುತ್ತದೆ. ಹಾಜರಾತಿ ಕೊರತೆ, ಅನಾರೋಗ್ಯ, ಹಾಗೂ ಇನ್ನಿತರ ಕಾರಣಗಳಿಂದ ಪ್ರಥಮ ಆಂತರಿಕ ಪರೀಕ್ಷೆಗೆ ಗೈರಾದ ವಿದ್ಯಾರ್ಥಿಗಳು ಲಗತ್ತಿಸಿದ ವೇಳಾಪತ್ರಿಕೆಯಂತೆ ಕಡ್ಡಾಯವಾಗಿ ಪರೀಕ್ಷೆಗೆ ಹಾಜರಾಗತಕ್ಕದ್ದು.

TimeTable2

Points to be followed by the students

  • ದಿನಾಂಕ 02-09-2020 ರಿಂದ 05-09-2020 ರ ವರೆಗೆ ನಡೆಯುವ ಪ್ರಥಮ ಹಾಗೂ ದ್ವಿತೀಯ ಆಂತರಿಕ ಮೌಲ್ಯಮಾಪನ ಪರೀಕ್ಷೆಗೆ ಕುಳಿತುಕೊಳ್ಳುವ 6 ನೇ ಸೆಮಿಸ್ಟರ್‍ನ ಎಲ್ಲಾ ವಿದ್ಯಾರ್ಥಿಗಳು ತಮ್ಮ ಕ್ಯಾಂಪಸ್ ಕಾರ್ಡ ಮತ್ತು ಐ.ಡಿ ಕಾರ್ಡಗಳೊಂದಿಗೆ ಸಮಯಕ್ಕೆ ಸರಿಯಾಗಿ ವೇಳಾಪತ್ರಿಕೆಗೆ ಅನುಗುಣವಾಗಿ ಹಾಜರಿರತಕ್ಕದ್ದು.
  • ರೋಲ್ ನಂಬರ್ ಮತ್ತು ಕ.ವಿ.ವಿ. ಸೀಟ್ ನಂ. ಗಳನ್ನು ಉತ್ತರ ಪತ್ರಿಕೆಗಳಲ್ಲಿ ತಪ್ಪದೇ ನಮೂದಿಸಬೇಕು.
  • ಪರೀಕ್ಷಾ ಕೊಠಡಿಯಲ್ಲಿ ಎರಡೂ ಹಾಜರಾತಿ ವರದಿಗಳನ್ನು ವಿದ್ಯಾರ್ಥಿಗಳು ಸರಿಯಾಗಿ ಗಮನಿಸಿ, I.A. Test- ಕಾಲಂನಲ್ಲಿ ತಪ್ಪದೇ ಸಹಿ ಮಾಡಬೇಕು.
  • ವಿದ್ಯಾರ್ಥಿಗಳು ಪರೀಕ್ಷೆಗೆ ಬರುವಾಗ ಮಾಸ್ಕ ಧರಿಸುವುದು ಕಡ್ಡಾಯ.

  • ಕಾಲೇಜಿನ ಆವಾರದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.