ವಲಯ ಮಟ್ಟದ ಯುವಜನೋತ್ಸವ ಎಸ್.ಡಿ.ಎಂ ಕಾಲೇಜು ‘ಚಾಂಪಿಯನ್’
ಹೊನ್ನಾವರ ಪಟ್ಟಣದ ಎಂಪಿ.ಇ. ಸೊಸೈಟಿಯ ಎಸ್.ಡಿ.ಎಂ. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಳಿಯಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಲಯ ಮಟ್ಟದ ಅಂತರ ಕಾಲೇಜು ವಿದ್ಯಾರ್ಥಿಗಳ ಯುವಜನೋತ್ಸವದಲ್ಲಿ ಭಾಗವಹಿಸಿ, ಅತಿ ಹೆಚ್ಚು ಪ್ರಶಸ್ತಿಗಳೊಂದಿಗೆ ‘ಚಾಂಪಿಯನ್’ ಆಗಿ ಹೊರ ಹೊಮ್ಮಿದ್ದಾರೆ.
ಕುಮಾರಿ ನಿಹಾರಿಕಾ ಭಟ್ಟ ಹಿಂದುಸ್ತಾನಿ ಶಾಸ್ತ್ರೀಯ ಗಾಯನದಲ್ಲಿ ಪ್ರಥಮ ಹಾಗೂ ಲಘು ಸಂಗೀತದಲ್ಲಿ ದ್ವಿತೀಯ ಸ್ಥಾನ.
ಕುಮಾರ ಮೆಕ್ವಿನ್ ಜಾಯ್ ಪಾಶ್ಚಾತ್ಯ ವಾಧ್ಯ ಸಂಗೀತ ಮತ್ತು ಪಾಶ್ಚಾತ್ಯ ಗಾಯನದಲ್ಲಿ ಪ್ರಥಮ.
ಕುಮಾರ ಪ್ರಶಾಂತ ಗೌಡ ಚಿತ್ರಕಲೆ ಮತ್ತು ವ್ಯಂಗ್ಯ ಚಿತ್ರದಲ್ಲಿ ಪ್ರಥಮ.
ಕುಮಾರ ಸಂದೀಪ ನಾಯ್ಕ ಹಾಗೂ ತಂಡ ರಸಪ್ರಶ್ನೆಯಲ್ಲಿ ಪ್ರಥಮ.
ಕುಮಾರಿ ನೇಹಾ ಭಟ್ಟ ಮತ್ತು ತಂಡ ಪಾಶ್ಚಾತ್ಯ ಸಮೂಹ ಗಾಯನ ಮತ್ತು ಭಾರತೀಯ ಸಮೂಹ ಗಾಯನದಲ್ಲಿ ಪ್ರಥಮ.
ಕುಮಾರ ವೈಜಯ್ ಭಂಡಾರಕರ್ ಶಾಸ್ತ್ರೀಯ ವಾದ್ಯ ಸಂಗೀತದಲ್ಲಿ ಪ್ರಥಮ.
ಕುಮಾರಿ ಕೃತಿಕಾ ಭಟ್ಟ ಹಾಗೂ ತಂಡ ಏಕಾಂಕ ನಾಟಕದಲ್ಲಿ ತೃತೀಯ.
ಕುಮಾರಿ ಸಪ್ನಾ ಗೆಲ್ಹೊಟ್ ಹಾಗೂ ತಂಡ ಇನ್‍ಸ್ಟಾಲೆಶನ್‍ನಲ್ಲಿ ದ್ವಿತೀಯ.
ಕುಮಾರಿ ಧನಲಕ್ಷ್ಮೀ ಮೊಗೇರ್ ಶಾಸ್ತ್ರೀಯ ನೃತ್ಯದಲ್ಲಿ ತೃತೀಯ ಸ್ಥಾನ ಪಡೆಯುವುದರೊಟ್ಟಿಗೆ 11 ಸ್ಪರ್ಧೆಗಳಲ್ಲಿ ವಿಶ್ವವಿದ್ಯಾಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ವಿಶೇಷ ಸಾಧನೆಗೆ ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷರಾದ ಶ್ರೀ ಕೃಷ್ಣ ಮೂರ್ತಿ ಭಟ್ಟ ಶಿವಾನಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ಡಾ.ವಿಜಯಲಕ್ಷ್ಮಿ ಎಂ. ನಾಯ್ಕ, ಯೂನಿಯನ್ ಉಪಾಧ್ಯಕ್ಷರಾದ ಡಾ. ಡಿ.ಎಲ್. ಹೆಬ್ಬಾರ್, ಯೂನಿಯನ್ ಸಲಹೆಗಾರರಾದ ಶ್ರೀ ಅನಂತಮೂರ್ತಿ, ಕಲಾ ಸಲಹೆಗಾರರಾದ ಶ್ರೀ ಸಂತೋಷ್ ವಿ ಗುಡಿಗಾರ್ ಹಾಗೂ ಬೋದಕ -ಬೋದಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.